KPSC Result 2022

KPSC Result 2022

ವಿವಿಧ ಇಲಾಖೆಗಳ ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ಅಂಕಪಟ್ಟಿ ಬಿಡುಗಡೆ

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಸಾಲಿನಲ್ಲಿ ಅಧಿಸೂಚಿಸಿದ್ದ ಗ್ರೂಪ್‌ ಸಿ ನಾನ್‌ ಟೆಕ್ನಿಕಲ್ (ಗ್ರಾಜುಯೇಟ್‌, ಗ್ರಾಜುಯೇಟ್‌ ಏತರ) ಹುದ್ದೆಗಳಿಗೆ ಸಂಬಂಧಿಸಿದಂತೆ, ಈ ಸದರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿ ಹುದ್ದೆಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಇದೀಗ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅಂಕಗಳನ್ನು ಚೆಕ್‌ ಮಾಡಿಕೊಳ್ಳಬಹುದು.

ದಿನಾಂಕ 25-11-2017 ಹಾಗೂ 31-07-2020 ರಂದು ಅಧಿಸೂಚಿಸಿದ್ದ, ಗ್ರಾಜುಯೇಟ್‌ ಲೆವೆಲ್ ಹಾಗೂ ನಾನ್‌ ಗ್ರಾಜುಯೇಟ್‌ ಲೆವೆಲ್ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಅರ್ಹರಾದ ಅಭ್ಯರ್ಥಿಗಳ ಅಂಕಗಳು ಇವಾಗಿವೆ. ಎರಡು ದಿನಾಂಕಗಳ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅಂಕಗಳನ್ನು, ಗ್ರಾಜುಯೇಟ್‌, ನಾನ್‌ ಗ್ರಾಜುಯೇಟ್‌ ಲೆವೆಲ್‌ ಎಂದು ಪ್ರತ್ಯೇಕವಾಗಿ ವಿಂಗಡಿಸಿ ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳ ಅಂಕಪಟ್ಟಿಯಲ್ಲಿ ರಿಜಿಸ್ಟರ್ ನಂಬರ್, ಪೇಪರ್-1, ಪೇಪರ್-2 ಹಾಗೂ ಒಟ್ಟು ಅಂಕಗಳ ಮಾಹಿತಿಗಳನ್ನು ಬಿಡುಗಡೆ ಮಾಡಲಾಗಿದೆ.

KPSC, KEA ಇಂದ ವಿವಿಧ 16 ಇಲಾಖೆ, ಸಂಸ್ಥೆ, ನಿಗಮಗಳ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಅಂಕಪಟ್ಟಿ ಚೆಕ್‌ ಮಾಡುವುದು ಹೇಗೆ?
– ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ https://www.kpsc.kar.nic.in/ ಗೆ ಭೇಟಿ ನೀಡಿ.
– ಓಪನ್ ಆದ ಕೆಪಿಎಸ್‌ಸಿ ಮುಖಪುಟದಲ್ಲಿ ‘ಅರ್ಜಿದಾರರ ಗಮನಕ್ಕೆ’ ಎಂದಿರುವ ಆಯ್ಕೆ ಕೆಳಗಡೆ ‘ಫಲಿತಾಂಶ’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಕೆಪಿಎಸ್‌ಸಿ’ಯ ಮತ್ತೊಂದು ಪುಟ ತೆರೆಯುತ್ತದೆ. ಇಲ್ಲಿ ಅಭ್ಯರ್ಥಿಗಳು ಗ್ರೂಪ್‌ ಸಿ ತಾಂತ್ರಿಕೇತರ ಹುದ್ದೆಗಳಿಗೆ ಅರ್ಹತೆ ಪಡೆದವರು ತಮ್ಮ ಅಂಕಗಳನ್ನು ಚೆಕ್‌ ಮಾಡಿಕೊಳ್ಳಬಹುದು.
– ಫಲಿತಾಂಶ ಚೆಕ್‌ ಮಾಡಲು ಡೈರೆಕ್ಟ್‌ ಲಿಂಕ್‌ ಅನ್ನು ಈ ಕೆಳಗಿನಂತೆಯೂ ಚೆಕ್‌ ಮಾಡಿಕೊಳ್ಳಬಹುದು.

KPSC Marks list of Group C Non Technical Eligible Candidates

ಕೆಪಿಎಸ್‌ಸಿ ಲೇಟೆಸ್ಟ್‌ ಪ್ರಕಟಣೆಗಳು
– ಕೆಪಿಎಸ್‌ಸಿ’ಯು ವಿವಿಧ ಸಾಲಿನ 16 ವಿವಿಧ ಇಲಾಖೆಗಳ ಸರ್ಕಾರಿ ಹುದ್ದೆಗಳ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆ, ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ವೇಳಾಪಟ್ಟಿಗಳನ್ನು ಬಿಡುಗಡೆ ಮಾಡಿದೆ.

– ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ.

– ಆಯೋಗವು ನಡೆಸಲಿರುವ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಕುರಿತು ಅಭ್ಯರ್ಥಿಗಳಿಗೆ ಹೆಚ್ಚುವರಿ ಮಾಹಿತಿಯನ್ನು ಪ್ರಕಟಿಸಲಾಗಿದೆ

– 2021ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ಫಲಿತಾಂಶವನ್ನು (ಕನ್ನಡ ಭಾಷಾ ಪರೀಕ್ಷೆ ವಿಷಯ ಸಂಕೇತ:47 & 73 ಹೊರತುಪಡಿಸಿ ) ಬಿಡುಗಡೆ ಮಾಡಿದೆ.

KRIDL Jobs Exam Dates 2023: ಕೆಆರ್‌ಐಡಿಎಲ್ ಜೆಇ, ಎಇ, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೆ ದಿನಾಂಕಗಳು ಪ್ರಕಟ

2 thoughts on “KPSC Result 2022”

  1. At the beginning, I was still puzzled. Since I read your article, I have been very impressed. It has provided a lot of innovative ideas for my thesis related to gate.io. Thank u. But I still have some doubts, can you help me? Thanks.

Leave a Comment

Your email address will not be published. Required fields are marked *