Karnataka Yuvanidhi Scheme 3000rs – Eligibility, Starting date, Apply Online

Karnataka YuvaNidhi Scheme – Eligibility, Starting date, Apply Online

ಕರ್ನಾಟಕ ಯುವನಿಧಿ ಯೋಜನೆ – ಅರ್ಹತೆ, ಪ್ರಾರಂಭ ದಿನಾಂಕ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Karnataka YuvaNidhi Scheme

Karnataka YuvaNidhi Scheme karnataka: 2023 ರಲ್ಲಿ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ನಂತರ ನಿರುದ್ಯೋಗಿಗಳಾಗಿ ಉಳಿದಿರುವ ಜನರು ಎರಡು ವರ್ಷಗಳವರೆಗೆ ಭತ್ಯೆಯನ್ನು ಪಡೆಯುತ್ತಿರುವ ಕಾಂಗ್ರೆಸ್‌ನ ಐದನೇ ಚುನಾವಣಾ ಖಾತರಿ ಯೋಜನೆಯಾದ ಯುವನಿಧಿಯ ನೋಂದಣಿಯನ್ನು ಕರ್ನಾಟಕ ಸರ್ಕಾರ ಮಂಗಳವಾರ ತೆರೆದಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಅವರೊಂದಿಗೆ ನೋಂದಣಿ ಲಿಂಕ್‌ಗೆ ಚಾಲನೆ ನೀಡಿದರು.

2022-2023ರಲ್ಲಿ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಸುಮಾರು 5.3 ಲಕ್ಷ ಜನರನ್ನು ಅರ್ಹ ಫಲಾನುಭವಿಗಳೆಂದು ಗುರುತಿಸಲಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವವರು ಅರ್ಹರಲ್ಲ.

Join Telegram ಟೆಲಿಗ್ರಾಮ್ ಸೇರಿ
Join WhatsApp Group Whatsapp ಸೇರಿ

Karnataka Yuvanidhi Scheme eligibility

ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ.

  1. 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ.
  2. ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
  3. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
  4. ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
  5. ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.

How to apply for 3000 for Graduate students

ಯುವ ನಿಧಿಗೆ ಅರ್ಜಿ ಸಲ್ಲಿಕೆ ಹೇಗೆ?

  • ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
  • ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾ‌ರ್ ಕಾರ್ಡ್‌ ತೆಗೆದಿಟ್ಟುಕೊಳ್ಳಿ.
  • ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿಬೇಕು, ಖಾತೆಯೇ ಇಲ್ಲದಿದ್ದರೆ ಈಗಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಡಿ.
  • ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
  • ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು).

✅ ಕರ್ನಾಟಕ ಗೃಹ ಲಕ್ಷ್ಮೀ ಯೋಜನೆ ಸ್ಥಿತಿಯನ್ನು RC ಸಂಖ್ಯೆ @ahara.kar.nic.in ಮೂಲಕ ಪರಿಶೀಲಿಸಿ  ಕಂತಿನ ಮೊತ್ತವನ್ನು ಜಮಾ ಮಾಡಲಾಗಿದೆ

✅ 10ನೇ Pass ವಿದ್ಯಾರ್ಥಿಗಳ ಜಿಲ್ಲಾ ನ್ಯಾಯಾಲಯದ ನೇಮಕಾತಿ 2023

 

Karnataka YuvaNidhi Yojana Apply Online

ಯುವ ನಿಧಿ ಅರ್ಜಿ ಎಲ್ಲಿ ಸಲ್ಲಿಸಬೇಕು?

ಯುವನಿಧಿಗೆ (Yuvanidhi) ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇನ್ನೂ ಅಧಿಕೃತವಾಗಿ ಹೇಳಿಲ್ಲ. ನಾವೇ ಮೊಬೈಲ್‌ನಲ್ಲಿ, ಕಂಪ್ಯೂಟರ್‌ಗಳಲ್ಲಿ ಅರ್ಜಿ ತುಂಬಬಹುದು. ಬೇರೆ ಕೇಂದ್ರಗಳ ಸಹಕಾರವನ್ನು ಕೂಡಾ ನೀಡಲಾಗುತ್ತದೆ ಎನ್ನಲಾಗಿದೆ.

  • ರಾಜ್ಯ ಸರಕಾರದ ‘ಯುವನಿಧಿ’ ಯೋಜನೆ ಮೂಲಕ ನಿರುದ್ಯೋಗ ಭತ್ಯೆ ಪಡೆಯಲು ಅರ್ಜಿ ಸಲ್ಲಿಸುವವರು ಕನಿಷ್ಠ ಆರು ವರ್ಷ ಕರ್ನಾಟಕದಲ್ಲಿ ವಾಸವಾಗಿದ್ದು, ರಾಜ್ಯದಲ್ಲಿ ಪದವಿ, ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು. ಯೋಜನೆಯ ನೋಂದಣಿ ಡಿ.26ರಿಂದ ಆರಂಭವಾಗಲಿದೆ.

Subscribe our YouTube channel for video Current Affairs Kannada: Subscribe Now

Karnataka YuvaNidhi Scheme apply Online ನೋಂದಣಿ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ:

ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್ ಮಾಡಿಕೊಂಡು ಯುವನಿಧಿ ಯೋಜನೆ ಸೇವೆ ಆಯ್ಕೆ ಮಾಡಿಕೊಳ್ಳಬೇಕು

  • ಮುಖಪುಟದಲ್ಲಿ ಲಾಗ್‌ಆನ್ ನಂತರ ಅರ್ಜಿ ನಮೂನೆ ತೆರೆದುಕೊಳ್ಳಲಿದ್ದು ಮೊದಲಿಗೆ ಅಭ್ಯರ್ಥಿಗಳು ನಿಬಂಧನೆಗಳನ್ನು ಓದಿ ಮೊದಲ ಘೋಷಣೆ ಮಾಡಿಕೊಳ್ಳಬೇಕು
  • ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು
  • ಆಧಾರ್ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೆವೈಸಿ ಮಾಹಿತಿ ಪಡೆಯಬೇಕು.
  • ವಿದ್ಯಾರ್ಹತೆ ಮಾಹಿತಿ ಸಂಬಂಧ ಪ್ರಮಾಣ ಪತ್ರದಲ್ಲಿರುವ ನೋಂದಣಿ ಸಂಖ್ಯೆ ನಮೂದಿಸಿದ ತಕ್ಷಣ ಸ್ವಯಂ ಚಾಲಿತವಾಗಿ NAD ಪೋರ್ಟಲ್ ನಿಂದ ಸಕ್ರಿಯಗೊಳಿಸುತ್ತದೆ.
  • ಜಾತಿ- ಪ್ರವರ್ಗ ಆಯ್ಕೆ ಮಾಡಿಕೊಳ್ಳಬೇಕು.
  • ಮೊಬೈಲ್ ಸಂಖ್ಯೆ ನೀಡಿ ಒಟಿಪಿ ಪಡೆಯಬೇಕು. ಇ-ಮೇಲ್ ವಿಳಾಸ ದಾಖಲಿಸಿ ಒಟಿಪಿ ಪಡೆದು ಮತ್ತೊಮ್ಮೆ ದಾಖಲಿಸಬೇಕು
  • ಅರ್ಜಿ ಸ್ವೀಕೃತಿ ಯಶಸ್ವಿಯಾಗಿರುವ ಬಗ್ಗೆ ಸಂದೇಶ ರವಾನೆಯಾಗುತ್ತದೆ.
  • ನಂತರ ಸ್ವೀಕೃತಿ ಸೃಜನೆಯಾಗಲಿದ್ದು, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು

Application for Karnataka YuvaNidhi Scheme

Important and Useful Links  

Yuvanidi Direct Apply Link
Click here 
Official information
Notification PDF
Yuvanidi official website
Click here
★★ You Can Also Check ★★
Join WhatsApp group for Daily Updates Latest Govt Jobs
Read Daily Current Affairs Central Government Jobs
10th Pass Govt Jobs Karnataka Govt Jobs
12th Pass Govt Jobs Indian Railway Jobs

Subscribe our YouTube channel for video Current Affairs Kannada: Subscribe Now

1 thought on “Karnataka Yuvanidhi Scheme 3000rs – Eligibility, Starting date, Apply Online”

Leave a Comment

Your email address will not be published. Required fields are marked *